1 ಅರಸುಗಳು 1 : 1 (KNV)
ಅರಸನಾದ ದಾವೀದನು ವೃದ್ಧನಾಗಿಯೂ ಬಹಳ ಪ್ರಾಯಹೋದವನಾಗಿಯೂ ಇರುವಾಗ ಅವನನ್ನು ವಸ್ತ್ರಗಳಿಂದ ಹೊದಿಸಿದರು; ಆದರೆ ಅವನಿಗೆ ಬೆಚ್ಚಗಾಗಲಿಲ್ಲ.
1 ಅರಸುಗಳು 1 : 2 (KNV)
ಆದದರಿಂದ ಅವನ ಸೇವಕರು ಅವನಿಗೆ--ಅರಸನಾದ ನಮ್ಮ ಒಡೆಯನಿ ಗೋಸ್ಕರ ಕನ್ನಿಕೆಯನ್ನು ಹುಡುಕುವೆವು; ಅವಳು ಅರಸನ ಬಳಿಯಲ್ಲಿ ನಿಂತು ಅವನನ್ನು ಆದರಿಸಿ ಅರಸನಾದ ನಮ್ಮ ಒಡೆಯನಿಗೆ ಬೆಚ್ಚಗೆ ಆಗುವ ಹಾಗೆ ಅವನ ಮಗ್ಗುಲಲ್ಲಿ ಮಲಗಲಿ ಅಂದರು.
1 ಅರಸುಗಳು 1 : 3 (KNV)
ಹಾಗೆಯೇ ಅವರು ಸೌಂದರ್ಯವತಿಯಾದ ಹುಡುಗಿಗೋಸ್ಕರ ಇಸ್ರಾ ಯೇಲಿನ ಮೇರೆಗಳಲ್ಲೆಲ್ಲಾ ಹುಡುಕಿ ಶೂನೇಮ್‌ಳಾದ ಅಬೀಷಗ್‌ಳನ್ನು ಕಂಡುಕೊಂಡು ಅವಳನ್ನು ಅರಸನ ಬಳಿಗೆ ಕರತಂದರು.
1 ಅರಸುಗಳು 1 : 4 (KNV)
ಈ ಸೌಂದರ್ಯವತಿಯಾದ ಹುಡುಗಿಯು ಅರಸನನ್ನು ಆದರಿಸಿ ಅವನನ್ನು ಸೇವಿ ಸುತ್ತಾ ಇದ್ದಳು; ಆದರೆ ಅರಸನು ಅವಳನ್ನು ಅರಿಯದೆ ಇದ್ದನು.
1 ಅರಸುಗಳು 1 : 5 (KNV)
ಆಗ ಹಗ್ಗೀತಳ ಮಗನಾದ ಅದೋನೀಯನು ತನ್ನನ್ನು ಹೆಚ್ಚಿಸಿಕೊಂಡು--ನಾನೇ ಅರಸನಾಗಿರಬೇಕು ಅಂದುಕೊಂಡು ತನಗೋಸ್ಕರ ರಥಗಳನ್ನೂ ರಾಹುತ ರನ್ನೂ ತನ್ನ ಮುಂದೆ ಓಡುವದಕ್ಕೆ ಐವತ್ತು ಮಂದಿ ಮನುಷ್ಯರನ್ನೂ ಸಿದ್ಧಮಾಡಿದನು.
1 ಅರಸುಗಳು 1 : 6 (KNV)
ಅವನ ತಂದೆಯು ಎಂದಾದರೂ--ನೀನು ಯಾಕೆ ಹೀಗೆ ಮಾಡಿದಿ ಎಂದು ಹೇಳಿ ಅವನನ್ನು ಗದರಿಸಲಿಲ್ಲ. ಇದಲ್ಲದೆ ಅವನು ಬಹು ರೂಪವಂತನಾಗಿದ್ದನು.
1 ಅರಸುಗಳು 1 : 7 (KNV)
ಅಬ್ಷಾಲೋಮನ ತರು ವಾಯ ಅವನ ತಾಯಿ ಅವನನ್ನು ಹೆತ್ತಳು. ಅವನು ಚೆರೂಯಳ ಮಗನಾದ ಯೋವಾಬನ ಸಂಗಡಲೂ ಯಾಜಕನಾದ ಎಬ್ಯಾತಾರನ ಸಂಗಡಲೂ ಮಾತನಾ ಡಿದನು; ಅವರು ಅದೋನೀಯನನ್ನು ಹಿಂಬಾಲಿಸಿ ಅವನಿಗೆ ಸಹಾಯಕರಾಗಿದ್ದರು.
1 ಅರಸುಗಳು 1 : 8 (KNV)
ಆದರೆ ಯಾಜಕ ನಾದ ಚಾದೋಕನೂ ಯೆಹೋಯಾದಾವನ ಮಗ ನಾದ ಬೆನಾಯನೂ ಪ್ರವಾದಿಯಾದ ನಾತಾನನೂ ಶಿಮ್ಮಿಯೂ ರೇಗಿಯೂ ದಾವೀದನ ಪರಾಕ್ರಮ ಶಾಲಿಗಳೂ ಅದೋನೀಯನ ಸಂಗಡ ಹೋಗಲಿಲ್ಲ.
1 ಅರಸುಗಳು 1 : 9 (KNV)
ಆಗ ಅದೋನೀಯನು ರೋಗೆಲ್‌ ಬಳಿಯಲ್ಲಿರುವ ಚೋಹೆಲೆತ್‌ ಎಂಬ ಕಲ್ಲಿನ ಹತ್ತಿರ ಕುರಿಗಳನ್ನೂ ಎತ್ತುಗಳನ್ನೂ ಕೊಬ್ಬಿದ ಪಶುಗಳನ್ನೂ ಕೊಲ್ಲಿಸಿ ಅರಸನ ಮಕ್ಕಳಾದ ತನ್ನ ಸಮಸ್ತ ಸಹೋದರರನ್ನೂ ಅರಸನ ಸೇವಕರಾದ ಸಮಸ್ತ ಯೆಹೂದದ ಜನರನ್ನೂ ಕರೆದನು.
1 ಅರಸುಗಳು 1 : 10 (KNV)
ಆದರೆ ಪ್ರವಾದಿಯಾದ ನಾತಾನನನ್ನೂ ಬೆನಾಯನನ್ನೂ ಪರಾಕ್ರಮಶಾಲಿಗಳನ್ನೂ ತನ್ನ ಸಹೋ ದರನಾದ ಸೊಲೊಮೋನನನ್ನೂ ಕರೆಯಲಿಲ್ಲ.
1 ಅರಸುಗಳು 1 : 11 (KNV)
ಆಗ ನಾತಾನನು ಸೊಲೊಮೋನನ ತಾಯಿ ಯಾದ ಬತ್ಷೆಬಳಿಗೆ--ನಮ್ಮ ಒಡೆಯನಾದ ದಾವೀದನು ಅರಿಯದಿರುವಾಗ ಹಗ್ಗೀತಳ ಮಗನಾದ ಅದೋನೀ ಯನು ಆಳುತ್ತಾನೆಂದು ನೀನು ಕೇಳಲಿಲ್ಲವೋ?
1 ಅರಸುಗಳು 1 : 12 (KNV)
ಆದದರಿಂದ ನೀನು ನಿನ್ನ ಪ್ರಾಣವನ್ನೂ ನಿನ್ನ ಮಗ ನಾದ ಸೊಲೊಮೋನನ ಪ್ರಾಣವನ್ನೂ ರಕ್ಷಿಸಿಕೊಳ್ಳುವ ಹಾಗೆ ಅಪ್ಪಣೆಯಾದರೆ ನಿನಗೆ ಆಲೋಚನೆ ಹೇಳು ತ್ತೇನೆ.
1 ಅರಸುಗಳು 1 : 13 (KNV)
ನೀನು ದಾವೀದನ ಬಳಿಗೆ ಹೋಗಿ ಅವ ನಿಗೆ--ಅರಸನಾದ, ನನ್ನ ಒಡೆಯನೇ, ನಿಶ್ಚಯವಾಗಿ ನನ್ನ ತರುವಾಯ ನಿನ್ನ ಮಗನಾದ ಸೊಲೊಮೋನನು ಆಳುವನೆಂದೂ ಅವನು ನನ್ನ ಸಿಂಹಾಸನದ ಮೇಲೆ ಕುಳಿತುಕೊಳ್ಳುವನೆಂದೂ ನಿನ್ನ ದಾಸಿಗೆ ಆಣೆ ಇಟ್ಟು ಹೇಳಲಿಲ್ಲವೋ? ಹೀಗಿರಲಾಗಿ ಅದೋನೀಯನು ಆಳುವದು ಯಾಕೆ ಎಂದು ಹೇಳು.
1 ಅರಸುಗಳು 1 : 14 (KNV)
ಇಗೋ, ನೀನು ಇನ್ನೂ ಅರಸನ ಸಂಗಡ ಮಾತ ನಾಡುತ್ತಿರುವಾಗ ನಾನು ನಿನ್ನ ಹಿಂದೆಯೇ ಒಳಗೆ ಬಂದು ನಿನ್ನ ಮಾತು ಗಳನ್ನು ಸ್ಥಿರಮಾಡುವೆನು ಅಂದನು.
1 ಅರಸುಗಳು 1 : 15 (KNV)
ಆಗ ಬತ್ಷೆಬೆಳು ಕೊಠಡಿಯೊಳಗೆ ಅರಸನ ಬಳಿಗೆ ಹೋದಳು.
1 ಅರಸುಗಳು 1 : 16 (KNV)
ಅರ ಸನು ಅತಿವೃದ್ಧನಾಗಿರುವದರಿಂದ ಶೂನೇಮ್ಯಳಾದ ಅಬೀಷಗ್‌ಳು ಅರಸನಿಗೆ ಸೇವೆಮಾಡುತ್ತಾ ಇದ್ದಳು. ಬತ್ಷೆಬೆಳು ಬಾಗಿ ಅರಸನಿಗೆ ವಂದನೆ ಮಾಡಿದಳು. ಅರಸನು--ನಿನಗೇನು ಬೇಕು ಅಂದನು.
1 ಅರಸುಗಳು 1 : 17 (KNV)
ಆಕೆಯು ಅವನಿಗೆ--ನನ್ನ ಒಡೆಯನೇ, ನಿಶ್ಚಯವಾಗಿ ನಿನ್ನ ತರುವಾಯ ನಿನ್ನ ಮಗನಾದ ಸೊಲೊಮೋನನು ಆಳುವನೆಂದೂ ಅವನು ನಿನ್ನ ಸಿಂಹಾಸನದ ಮೇಲೆ ಕುಳಿತುಕೊಳ್ಳುವನೆಂದೂ ನೀನು ನಿನ್ನ ದಾಸಿಗೆ ನಿನ್ನ ದೇವರಾದ ಕರ್ತನ ಹೆಸರಿನಲ್ಲಿ ಪ್ರಮಾಣಮಾಡಿದಿ.
1 ಅರಸುಗಳು 1 : 18 (KNV)
ಆದರೆ ಇಗೋ, ಅರಸನಾಗಿರುವ ನನ್ನ ಒಡೆಯ ನಾದ ನೀನು ಅರಿಯದೆ ಇರುವಾಗ ಅದೋನೀಯನು ಆಳುತ್ತಾನೆ.
1 ಅರಸುಗಳು 1 : 19 (KNV)
ಇದಲ್ಲದೆ ಅವನು ಬಹಳ ಎತ್ತುಗಳನ್ನೂ ಕೊಬ್ಬಿದ ಪಶುಗಳನ್ನೂ ಕುರಿಗಳನ್ನೂ ಕೊಲ್ಲಿಸಿ ಅರಸನ ಮಕ್ಕಳೆಲ್ಲರನ್ನೂ ಯಾಜಕನಾದ ಎಬ್ಯಾತಾರನನ್ನೂ ಸೈನ್ಯಾಧಿಪತಿಯಾದ ಯೋವಾಬನನ್ನೂ ಕರೆದಿದ್ದಾನೆ.
1 ಅರಸುಗಳು 1 : 20 (KNV)
ಆದರೆ ನಿನ್ನ ಸೇವಕನಾದ ಸೊಲೊಮೋನನನ್ನು ಅವನು ಕರೆಯಲಿಲ್ಲ. ಆದದರಿಂದ ಅರಸನಾದ ನನ್ನ ಒಡೆಯನೇ, ನಿನ್ನ ತರುವಾಯ ನನ್ನ ಒಡೆಯನಾದ ಅರಸನ ಸಿಂಹಾಸನದ ಮೇಲೆ ಕುಳಿತುಕೊಳ್ಳುವವನಾ ರೆಂದು ನೀನು ಹೇಳುವ ಹಾಗೆ ಸಮಸ್ತ ಇಸ್ರಾಯೇಲ್ಯರ ಕಣ್ಣುಗಳು ನಿನ್ನ ಮೇಲೆ ಇರುತ್ತವೆ.
1 ಅರಸುಗಳು 1 : 21 (KNV)
ಇಲ್ಲದಿದ್ದರೆ ಅರಸನಾದ ನನ್ನ ಒಡೆಯನು ತನ್ನ ಪಿತೃಗಳ ಸಂಗಡ ಮಲಗಿಕೊಂಡಿರುವಾಗ ನಾನೂ ನನ್ನ ಮಗನಾದ ಸೊಲೊಮೋನನೂ ಅಪರಾಧಿಗಳಾಗಿ ಎಣಿಸಲ್ಪಟ್ಟೇವು ಅಂದಳು.
1 ಅರಸುಗಳು 1 : 22 (KNV)
ಅವಳು ಅರಸನ ಸಂಗಡ ಇನ್ನೂ ಮಾತನಾಡು ತ್ತಿರುವಾಗ ಇಗೋ, ಪ್ರವಾದಿಯಾದ ನಾತಾನನು ಬಂದನು;
1 ಅರಸುಗಳು 1 : 23 (KNV)
ಆಗ ಅರಸನಿಗೆ--ಇಗೋ, ಪ್ರವಾದಿ ಯಾದ ನಾತಾನನು ಅಂದರು. ಅವನು ಒಳಗೆ ಅರಸನ ಮುಂದೆ ಬಂದಾಗ ಮೋರೆ ಕೆಳಗಾಗಿ ನೆಲಕ್ಕೆ ಅಡ್ಡ ಬಿದ್ದನು. ಆಗ ನಾತಾನನು--ಓ ಅರಸನಾದ ನನ್ನ ಒಡೆಯನೇ,
1 ಅರಸುಗಳು 1 : 24 (KNV)
ಅದೋನೀಯನು ನನ್ನ ತರುವಾಯ ಆಳುವನೆಂದೂ ನಿನ್ನ ಸಿಂಹಾಸನದ ಮೇಲೆ ಕುಳಿತು ಕೊಳ್ಳುವನೆಂದೂ ನೀನು ಹೇಳಿದ್ದು ಹೌದೋ?
1 ಅರಸುಗಳು 1 : 25 (KNV)
ಈ ಹೊತ್ತು ಅವನು ಇಳಿದು ಹೋಗಿ ಎತ್ತು ಗಳನ್ನೂ ಕೊಬ್ಬಿದ ಪಶುಗಳನ್ನೂ ಕುರಿಗಳನ್ನೂ ಅನೇಕ ವಾಗಿ ಕೊಲ್ಲಿಸಿ ಅರಸನ ಮಕ್ಕಳೆಲ್ಲರನ್ನೂ ಸೈನ್ಯಾಧಿಪತಿ ಗಳನ್ನೂ ಯಾಜಕನಾದ ಎಬ್ಯಾತಾರನನ್ನೂ ಕರೆದಿ ದ್ದಾನೆ. ಇಗೋ, ಅವರು ಅವನ ಮುಂದೆ ತಿಂದು, ಕುಡಿದು--ಅರಸನಾದ ಅದೋನೀಯನನ್ನು ದೇವರು ರಕ್ಷಿಸಲಿ ಎಂದು ಅನ್ನುತ್ತಾರೆ.
1 ಅರಸುಗಳು 1 : 26 (KNV)
ಆದರೆ ನನ್ನನ್ನೂ ಅಂದರೆ ನಿನ್ನ ಸೇವಕನಾದ ನನ್ನನ್ನೂ ಯೆಹೋಯಾ ದಾವನ ಮಗನಾದ ಬೆನಾಯನನ್ನೂ ನಿನ್ನ ಸೇವಕನಾದ ಸೊಲೊಮೋನನನ್ನೂ ಅವನು ಕರೆಯಲೇ ಇಲ್ಲ.
1 ಅರಸುಗಳು 1 : 27 (KNV)
ಅರಸನಾದ ನನ್ನ ಒಡೆಯನಿಂದ ಈ ಕಾರ್ಯ ವಾಯಿತೋ? ಅರಸನಾದ ನನ್ನ ಒಡೆಯನು ತನ್ನ ತರುವಾಯ ತನ್ನ ಸಿಂಹಾಸನದ ಮೇಲೆ ಕುಳಿತು ಕೊಳ್ಳುವವನು ಯಾರೆಂದು ನಿನ್ನ ಸೇವಕನಾದ ನನಗೆ ನೀನು ತಿಳಿಸದೆ ಹೋದಿಯೋ ಅಂದನು.
1 ಅರಸುಗಳು 1 : 28 (KNV)
ಆಗ ಅರಸನಾದ ದಾವೀದನು ಪ್ರತ್ಯುತ್ತರವಾಗಿ--ಬತ್ಷೆ ಬೆಳನ್ನು ನನ್ನ ಬಳಿಗೆ ಕರೆ ಅಂದನು. ಅವಳು ಅರಸನ ಸನ್ನಿಧಾನಕ್ಕೆ ಬಂದು ಅರಸನ ಮುಂದೆ ನಿಂತಿರುವಾಗ ಅರಸನು--ನಿಶ್ಚಯವಾಗಿ
1 ಅರಸುಗಳು 1 : 29 (KNV)
ನಿನ್ನ ಮಗನಾದ ಸೊಲೊಮೋನನು ನನ್ನ ತರುವಾಯ ಆಳುವನೆಂದೂ
1 ಅರಸುಗಳು 1 : 30 (KNV)
ಅವನು ನನಗೆ ಬದಲಾಗಿ ನನ್ನ ಸಿಂಹಾಸನದ ಮೇಲೆ ಕುಳಿತುಕೊಳ್ಳುವನೆಂದೂ ನಾನು ಇಸ್ರಾ ಯೇಲಿನ ದೇವರಾದ ಕರ್ತನ ಹೆಸರಿನಲ್ಲಿ ನಿನಗೆ ಹೇಗೆ ಆಣೆ ಇಟ್ಟು ಹೇಳಿದೆನೋ ಹಾಗೆಯೇ ಈ ದಿನ ನಿಶ್ಚಯವಾಗಿ ಮಾಡುವೆನೆಂದೂ ಸಮಸ್ತ ಇಕ್ಕಟ್ಟಿ ನೊಳಗಿಂದ ನನ್ನ ಪ್ರಾಣವನ್ನು ವಿಮೋಚಿಸಿದ ಕರ್ತನ ಜೀವದ ಮೇಲೆ ಆಣೆ ಇಡುತ್ತೇನೆಂದೂ ಪ್ರಮಾಣ ವಾಗಿ ಹೇಳುತ್ತೇನೆ.
1 ಅರಸುಗಳು 1 : 31 (KNV)
ಆಗ ಬತ್ಷೆಬೆಳು ಮುಖವನ್ನು ನೆಲಕ್ಕೆ ಬೊಗ್ಗಿಸಿ ಅರಸನನ್ನು ವಂದಿಸಿ--ನನ್ನ ಒಡೆ ಯನೂ ಅರಸನೂ ಆದ ದಾವೀದನು ಎಂದೆಂದಿಗೂ ಬಾಳಲಿ ಅಂದಳು.
1 ಅರಸುಗಳು 1 : 32 (KNV)
ಆಗ ಅರಸನಾದ ದಾವೀದನು--ಯಾಜಕನಾದ ಚಾದೋಕನನ್ನೂ ಪ್ರವಾದಿಯಾದ ನಾತಾನನನ್ನೂ ಯೆಹೋಯಾದಾವನ ಮಗನಾದ ಬೆನಾಯನನ್ನೂ ನನ್ನ ಬಳಿಗೆ ಕರೆಯಿರಿ ಅಂದನು.
1 ಅರಸುಗಳು 1 : 33 (KNV)
ಅವರು ಅರಸನ ಸಮ್ಮುಖಕ್ಕೆ ಬಂದಾಗ ಅರಸನು ಅವರಿಗೆ--ನೀವು ನಿಮ್ಮ ಯಜಮಾನನ ಸೇವಕರನ್ನು ಕರಕೊಂಡುಹೋಗಿ ನನ್ನ ಮಗನಾದ ಸೊಲೊಮೋನನನ್ನು ನನ್ನ ಸ್ವಂತ ಹೇಸರಕತ್ತೆಯ ಮೇಲೆ ಏರಿಸಿ ಗೀಹೋನಿಗೆ ಅವ ನನ್ನು ಕರಕೊಂಡು ಹೋಗಿರಿ.
1 ಅರಸುಗಳು 1 : 34 (KNV)
ಅಲ್ಲಿ ಯಾಜಕನಾದ ಚಾದೋಕನೂ ಪ್ರವಾದಿಯಾದ ನಾತಾನನೂ ಅವ ನನ್ನು ಇಸ್ರಾಯೇಲಿನ ಮೇಲೆ ಅರಸನಾಗಿರಲು ಅಭಿ ಷೇಕಿಸಲಿ. ತುತೂರಿಯನ್ನು ಊದಿ--ಅರಸನಾದ ಸೊಲೊಮೋನನನ್ನು ದೇವರು ರಕ್ಷಿಸಲಿ ಅನ್ನಿರಿ.
1 ಅರಸುಗಳು 1 : 35 (KNV)
ಆಗ ಅವನು ಬಂದು ನನ್ನ ಸಿಂಹಾಸನದ ಮೇಲೆ ಕೂತು ಕೊಳ್ಳುವ ಹಾಗೆ ನೀವು ಅವನ ಹಿಂದೆ ಬನ್ನಿರಿ; ಅವನು ನನಗೆ ಬದಲಾಗಿ ಅರಸನಾಗಿರುವನು; ಇಸ್ರಾಯೇಲಿನ ಮೇಲೆಯೂ ಯೆಹೂದದ ಮೇಲೆಯೂ ನಾಯಕ ನಾಗಿರಲು ನಾನು ಅವನನ್ನು ನೇಮಿಸಿದ್ದೇನೆ ಅಂದನು.
1 ಅರಸುಗಳು 1 : 36 (KNV)
ಯೆಹೋಯಾದಾವನ ಮಗನಾದ ಬೆನಾಯನು ಅರಸನಿಗೆ ಪ್ರತ್ಯುತ್ತರವಾಗಿ--ಆಮೆನ್‌: ಅರಸನಾದ ನನ್ನ ಒಡೆಯನ ದೇವರಾದ ಕರ್ತನು ಹಾಗೆಯೇ ಹೇಳಲಿ.
1 ಅರಸುಗಳು 1 : 37 (KNV)
ಕರ್ತನು ಅರಸನಾದ ನನ್ನ ಒಡೆಯನ ಸಂಗಡ ಹೇಗೆ ಇದ್ದನೋ ಹಾಗೆಯೇ ಸೊಲೊ ಮೋನನ ಸಂಗಡ ಇದ್ದು ನನ್ನ ಒಡೆಯನೂ ಅರಸನೂ ಆದ ದಾವೀದನ ಸಿಂಹಾಸನಕ್ಕಿಂತ ಇವನ ಸಿಂಹಾಸನ ವನ್ನು ಅಧಿಕವಾಗಮಾಡಲಿ ಅಂದನು.
1 ಅರಸುಗಳು 1 : 38 (KNV)
ಹಾಗೆಯೇ ಯಾಜಕನಾದ ಚಾದೋಕನೂ ಪ್ರವಾದಿಯಾದ ನಾತಾನನೂ ಯೆಹೋಯಾದಾವನ ಮಗನಾದ ಬೆನಾಯನೂ ಕೆರೆತ್ಯರೂ ಪೆಲೇತ್ಯರೂ ಹೋಗಿ ಸೊಲೊಮೋನನನ್ನು ಅರಸನಾದ ದಾವೀ ದನ ಹೇಸರ ಕತ್ತೆಯ ಮೇಲೆ ಏರಿಸಿ ಗೀಹೋನಿಗೆ ಕರತಂದರು.
1 ಅರಸುಗಳು 1 : 39 (KNV)
ಆಗ ಯಾಜಕನಾದ ಚಾದೋಕನು ಗುಡಾರದೊಳಗಿಂದ ತೈಲದ ಕೊಂಬನ್ನು ತಂದು ಸೊಲೊಮೋನನನ್ನು ಅಭಿಷೇಕಿಸಿದನು. ಅವರು ತುತೂರಿಯನ್ನು ಊದಿದರು. ಆಗ ಜನರೆಲ್ಲರು--ಅರಸನಾದ ಸೊಲೊಮೋನನನ್ನು ದೇವರು ರಕ್ಷಿಸಲಿ ಅಂದರು.
1 ಅರಸುಗಳು 1 : 40 (KNV)
ಇದಲ್ಲದೆ ಜನರೆಲ್ಲರು ಅವನ ಹಿಂದೆ ಬಂದರು. ಜನರು ಪಿಳ್ಳಂಗೋವಿಗಳನ್ನು ಊದಿ ಮಹಾ ಆನಂದದಿಂದ ಸಂತೋಷಿಸಿದರು. ಅವರ ಶಬ್ದದಿಂದ ಭೂಮಿಯು ಕಂಪಿಸಿತು.
1 ಅರಸುಗಳು 1 : 41 (KNV)
ಆಗ ಅದೋನೀಯನೂ ಅವನ ಸಂಗಡ ಕರೆಯಲ್ಪಟ್ಟವರೂ ತಿಂದು ತೀರಿಸಿದಾಗ ಅದನ್ನು ಕೇಳಿದರು. ಯೋವಾಬನು ತುತೂರಿಯ ಶಬ್ದವನ್ನು ಕೇಳಿದಾಗ--ಪಟ್ಟಣದಲ್ಲಿ ಗದ್ದಲದ ಶಬ್ದ ಯಾಕೆ ಅಂದನು.
1 ಅರಸುಗಳು 1 : 42 (KNV)
ಅವನು ಇನ್ನೂ ಮಾತನಾಡು ತ್ತಿರುವಾಗ ಇಗೋ, ಯಾಜಕನಾಗಿರುವ ಎಬ್ಯಾತಾರನ ಮಗನಾದ ಯೋನಾತಾನನು ಬಂದನು. ಅದೋನೀ ಯನು ಅವನಿಗೆ--ಒಳಗೆ ಬಾ; ಯಾಕಂದರೆ ನೀನು ಪರಾಕ್ರಮಶಾಲಿ, ಒಳ್ಳೇ ವರ್ತಮಾನವನ್ನು ತರುತ್ತೀ ಅಂದನು.
1 ಅರಸುಗಳು 1 : 43 (KNV)
ಆಗ ಯೋನಾತಾನನು ಪ್ರತ್ಯುತ್ತರವಾಗಿ ಅದೋನೀಯನಿಗೆ--ನಿಶ್ಚಯವಾಗಿ ನಮ್ಮ ಒಡೆಯ ನಾದ ದಾವೀದನು ಸೊಲೊಮೋನನನ್ನು ಅರಸನನ್ನಾಗಿ ಮಾಡಿದ್ದಾನೆ.
1 ಅರಸುಗಳು 1 : 44 (KNV)
ಇದಲ್ಲದೆ ಅರಸನು ಅವನ ಸಂಗಡ ಯಾಜಕನಾದ ಚಾದೋಕನನ್ನೂ ಪ್ರವಾದಿಯಾದ ನಾತಾನನನ್ನೂ ಯೆಹೋಯಾದಾವನ ಮಗನಾದ ಬೆನಾಯನನ್ನೂ ಕೆರೇತ್ಯರನ್ನೂ ಪೆಲೇತ್ಯರನ್ನೂ ಕಳುಹಿ ಸಿದ್ದಾನೆ.
1 ಅರಸುಗಳು 1 : 45 (KNV)
ಅವರು ಅವನನ್ನು ಅರಸನ ಹೇಸರಕತ್ತೆಯ ಮೇಲೆ ಏರಿಸಿ ಯಾಜಕನಾದ ಚಾದೋಕನೂ ಪ್ರವಾದಿ ಯಾದ ನಾತಾನನೂ ಅವನನ್ನು ಗೀಹೋನಿನಲ್ಲಿ ಅರಸನಾಗಿರಲು ಅಭಿಷೇಕಿಸಿದ್ದಾರೆ; ಅವರು ಸಂತೋಷ ಪಡುತ್ತಾ ಅಲ್ಲಿಂದ ಬಂದ ಕಾರಣ ಪಟ್ಟಣವು ಗದ್ದಲ ವಾಯಿತು.
1 ಅರಸುಗಳು 1 : 46 (KNV)
ನೀವು ಕೇಳುವ ಶಬ್ದವು ಇದೇ. ಇದಲ್ಲದೆ ಸೊಲೊಮೋನನು ರಾಜ್ಯ ಸಿಂಹಾಸನದ ಮೇಲೆ ಕುಳಿತುಕೊಂಡಿದ್ದಾನೆ.
1 ಅರಸುಗಳು 1 : 47 (KNV)
ಇದರ ಹೊರತು ಅರಸನ ಸೇವಕರು ನಮ್ಮ ಯಜಮಾನನೂ ಅರಸನೂ ಆದ ದಾವೀದನನ್ನು ಆಶೀರ್ವದಿಸಲು ಬಂದು--ದೇವರು ಸೊಲೊಮೋನನ ಹೆಸರನ್ನು ನಿನ್ನ ಹೆಸರಿಗಿಂತ ಉತ್ತಮ ವಾಗಿ ಮಾಡಲೆಂದೂ ಅವನ ಸಿಂಹಾಸನವನ್ನು ನಿನ್ನ ಸಿಂಹಾಸನಕ್ಕಿಂತ ದೊಡ್ಡದಾಗಿ ಮಾಡಲೆಂದೂ ಹೇಳುತ್ತಿ ರುವಾಗ ಅರಸನು ಮಂಚದ ಮೇಲೆ ಬಾಗಿದನು.
1 ಅರಸುಗಳು 1 : 48 (KNV)
ಅರಸನು--ನನ್ನ ಕಣ್ಣುಗಳು ನೋಡುತ್ತಿರುವಾಗ ಇಂದು ನನ್ನ ಸಿಂಹಾಸನದ ಮೇಲೆ ಕೂಡುವವನನ್ನು ನನಗೆ ಕೊಟ್ಟಿರುವ ಇಸ್ರಾಯೇಲಿನ ದೇವರಾದ ಕರ್ತನು ಸ್ತುತಿಸಲ್ಪಡಲಿ ಅಂದನು.
1 ಅರಸುಗಳು 1 : 49 (KNV)
ಆಗ ಅದೋನೀ ಯನ ಸಂಗಡವಿದ್ದವರೆಲ್ಲರೂ ಹೆದರಿಕೊಂಡು ಎದ್ದು ತಮ್ಮ ತಮ್ಮ ಸ್ಥಳಗಳಿಗೆ ಹೋದರು.
1 ಅರಸುಗಳು 1 : 50 (KNV)
ಆದರೆ ಅದೋನೀಯನು ಸೊಲೊಮೋನನಿಗೆ ಭಯಪಟ್ಟದ್ದರಿಂದ ಎದ್ದು ಹೋಗಿ ಬಲಿಪೀಠದ ಕೊಂಬುಗಳನ್ನು ಹಿಡುಕೊಂಡನು.
1 ಅರಸುಗಳು 1 : 51 (KNV)
ಆಗ ಒಬ್ಬನು ಅರಸನಾದ ಸೊಲೊಮೋನನಿಗೆ--ಇಗೋ, ಅದೋ ನೀಯನು ನಿನಗೆ ಭಯಪಡುತ್ತಾನೆ; ಯಾಕಂದರೆ ಇಗೋ, ಅವನು ಬಲಿಪೀಠದ ಕೊಂಬುಗಳನ್ನು ಹಿಡಿದು --ಅರಸನಾದ ಸೊಲೊಮೋನನು ಕತ್ತಿಯಿಂದ ತನ್ನ ಸೇವಕನನ್ನು ಕೊಲ್ಲುವದಿಲ್ಲವೆಂದು ಈ ಹೊತ್ತು ನನಗೆ ಆಣೆ ಇಡಲಿ ಎಂದು ಹೇಳಿದನು.
1 ಅರಸುಗಳು 1 : 52 (KNV)
ಅದಕ್ಕೆ ಸೊಲೊ ಮೋನನು--ಅವನು ಉತ್ತಮನಾಗಿದ್ದರೆ ಅವನ ಕೂದಲಲ್ಲಿ ಒಂದಾದರೂ ನೆಲಕ್ಕೆ ಬೀಳದು; ಆದರೆ ಅವನಲ್ಲಿ ಕೆಟ್ಟತನವು ಸಿಕ್ಕಿದರೆ ಅವನು ಸಾಯುವನು ಅಂದನು.ಅರಸನಾದ ಸೊಲೊಮೋನನು ಅವ ನನ್ನು ಕರೆಸಿದಾಗ ಬಲಿಪೀಠದ ಬಳಿಯಿಂದ ಅವ ನನ್ನು ಕರಕೊಂಡು ಬಂದರು. ಆಗ ಅವನು ಬಂದು ಅರಸನಾದ ಸೊಲೊಮೋನನಿಗೆ ಅಡ್ಡ ಬಿದ್ದನು. ಸೊಲೊಮೋನನು ಅವನಿಗೆ--ನಿನ್ನ ಮನೆಗೆ ಹೋಗು ಅಂದನು.
1 ಅರಸುಗಳು 1 : 53 (KNV)
ಅರಸನಾದ ಸೊಲೊಮೋನನು ಅವ ನನ್ನು ಕರೆಸಿದಾಗ ಬಲಿಪೀಠದ ಬಳಿಯಿಂದ ಅವ ನನ್ನು ಕರಕೊಂಡು ಬಂದರು. ಆಗ ಅವನು ಬಂದು ಅರಸನಾದ ಸೊಲೊಮೋನನಿಗೆ ಅಡ್ಡ ಬಿದ್ದನು. ಸೊಲೊಮೋನನು ಅವನಿಗೆ--ನಿನ್ನ ಮನೆಗೆ ಹೋಗು ಅಂದನು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35 36 37 38 39 40 41 42 43 44 45 46 47 48 49 50 51 52 53

BG:

Opacity:

Color:


Size:


Font: